Grama Daiwa

ಕನ್ನಡ

Parala Gutthu and Mukkodi

Parala Gutthu Permude village gods Ori Ullaya five magicians. We should also pray to the village gods as we pray to the village god. Parale Guthu, the first respectable Banta family in Permude and Mukkodi, the first respectable house of the Billavas, these two houses are the treasure houses of village deities.Ullaya Kodamandaya Jarandaya Kantheri Jumadi and Saral Jumadi are home to Parale Guthu. Pilichandi is the abode of God in Mukkodi. The master (guardian) of the Parale clan is known as Chauta. This house belonged to the Jains from time immemorial and later the god Kodamandaya killed seven Parels who belonged to the Parale tribe and settled the present descendants of the Kunda Bari tribe. Near this house there is a deity of the town called Paldatte Sana and here a four-day Nemotsava is held on the day after the full moon of Tulu. According to the calendar, Nemotsava happens on the day after the full moon that comes after the transit in the month of February. Gadupadi Nema For the nema that takes this house to do nema. Kambala is usually held in this house in the month of November-December. In the past, Kona Viddu in this house was visited by Konas from other houses in the town. Kodamandaya and Pilichandi also have a darshan and then Poo calls. For the nema of Paldatte Sana, Ullaya's Bali Murti should be brought by the chauts. Paniyar coconut should be given to this family in the event of gods held in Guthu families in Permude town.

Mukkodi is the first noble house of the Billava community of Permude. This house is the treasure house of Pilichandi, the most powerful deity of Permude town. Once upon a time, Pilichandi, who was the first to enter the Bollolimaru contract, entered Mukkodi with the intention of making Mukkodi the house of Pilichandi's storehouse and the family members of that house would become the darshan of Pilichandi. It should not be placed in other houses. Paniyar tarai should be offered to this house in the event of deities held in Guthu families of Permude town. When it is done in Gadupadi nema of Permude town, temple nema, paldatte sana and towards Mukkodi Mulagudde sana, when nema is done in the Sana of Mukkodi, the Bhandara of Pilichandi will be appointed. Along with the existing authority, Bhandara Dotta should go to the Nema place holding the Pilichandi tiger idol.

English

ಪಾರಾಳೆ ಗುತ್ತು ಮತ್ತು ಮುಕ್ಕೋಡಿ

ಪಾರಾಳೆ ಗುತ್ತು, ಪೆರ್ಮುದೆ ಊರಿಗೆ ಗ್ರಾಮ ದೈವಗಳು ಒರಿ ಉಲ್ಲಾಯ ಐವರು ಮಾಯಕಾರರು. ಗ್ರಾಮ ದೇವರನ್ನು ಪ್ರಾರ್ಥಿಸುವಂತೆ ಗ್ರಾಮ ದೈವಗಳನ್ನೂ ನಾವು ಪ್ರಾರ್ಥಿಸಬೇಕು. ಪೆರ್ಮುದೆಯಲ್ಲಿ ಪ್ರಥಮ ಗೌರವದ ಬಂಟ ಮನೆತನ ಪಾರಾಳೆ ಗುತ್ತು ಹಾಗೂ ಬಿಲ್ಲವರ ಪ್ರಥಮ ಮರ್ಯಾದೆಯ ಮನೆ ಮುಕ್ಕೋಡಿ ಈ ಎರಡು ಮನೆಗಳು ಗ್ರಾಮ ದೈವಗಳ ಭಂಡಾರ ಮನೆಯಾಗಿದೆ ಪಾರಾಳೆ ಗುತ್ತಿನಲ್ಲಿ ಉಲ್ಲಾಯ ಕೊಡಮಂದಾಯ ಜಾರಂದಾಯ ಕಾಂತೇರಿ ಜುಮಾದಿ ಮತ್ತು ಸರಳ ಜುಮಾದಿ ನೆಲೆಯಾಗಿದೆ. ಮುಕ್ಕೋಡಿಯಲ್ಲಿ ಪಿಲಿಚಂಡಿ ದೈವ ನೆಲೆಯಾಗಿದೆ. ಪಾರಾಳೆ ಗುತ್ತಿನ ಯಜಮಾನ (ಗಡಿ ಹಿಡಿದವರನ್ನು) ಚೌಟ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಈ ಮನೆಯು ಅನಾದಿಯಲ್ಲಿ ಜೈನರ ಮನೆತನ ವಾಗಿದ್ದು ಕಾಲಾನಂತರ ಕೊಡಮಂದಾಯ ದೈವವು ಪಾರಾಳೆ ಗುತ್ತಿನಲ್ಲಿದ್ದ ಏಳು ಜನ ಪಾರೆಳೆರ್ ಎನ್ನುವ ಜೈನರನ್ನು ಕೊಂದು ಬಂಟ ಜನಾಂಗದ ಕುಂದರ ಬರಿಯ ಈಗಿರುವ ವಂಶಸ್ಥರನ್ನು ಸ್ಥಿರ ಗೊಳಿಸಿತು.ಈ ಮನೆಯ ಹತ್ತಿರ ಪಾಲ್ದಟ್ಟೆ ಸಾನ ಎನ್ನುವ ಊರಿನ ದೈವಸ್ಥಾನವಿದ್ದು ಇಲ್ಲಿ ತುಳುವಿನ ಮಾಯಿದ ಪುಣ್ಣಮೆ,( ಹುಣ್ಣಿಮೆಯ) ಮರುದಿನ ಕೊಡಿಯೇರಿ ನಾಲ್ಕು ದಿನದ ನೇಮೋತ್ಸವ ನಡೆಯುತ್ತದೆ. ಕ್ಯಾಲೆಂಡರ್ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ಸಂಕ್ರಮಣದ ನಂತರ ಬರುವ ಹುಣ್ಣಿಮೆಯ ಮರುದಿನ ನೇಮೋತ್ಸವ ವಾಗುತ್ತದೆ. ಗಡುಪಾಡಿ ನೇಮ ಸೋಮನಾಥ ದೇವಸ್ಥಾನದ ಜಾತ್ರೆಯ ದಿನ ನಡೆಯುವ ನೇಮಕ್ಕೂ ಈ ಮನೆಯಿಂದ ಕೊಡಮಂದಾಯ ಭಂಡಾರ ಹೋಗಿ ನೇಮವಾಗಬೇಕು. ಈ ಮನೆಯಲ್ಲಿ ಸಾಧಾರಣ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಕಂಬಳ ನಡೆಯುತ್ತದೆ.ಹಿಂದೆ ಈ ಮನೆಯಲ್ಲಿ ಕೋಣ ವಿದ್ದು ಊರಿನ ಬೇರೆ ಮನೆಯ ಕೋಣಗಳು ಬಂದು ಕಂಬಳವಾಗುತ್ತಿತ್ತು. ಕೊಡಮಂದಾಯ ಮತ್ತು ಪಿಲಿಚಂಡಿಗೆ ದರ್ಶನವೂ ಇದೆ ನಂತರ ಪೂ ಕರೆ ಹಾಕುತ್ತಾರೆ. ಪಾಲ್ದಟ್ಟೆ ಸಾನದ ನೇಮಕ್ಕೆ ಉಲ್ಲಾಯನ ಬಲಿ ಮೂರ್ತಿಯನ್ನು ಚೌಟರು ಹಿಡಿದುಕೊಂಡು ಬರಬೇಕು. ಪೆರ್ಮುದೆ ಊರಿನಲ್ಲಿ ಗುತ್ತು ಮನೆತನಗಳಲ್ಲಿ ನಡೆಯುವ ದೈವಗಳ ಕಾರ್ಯಕ್ರಮದಲ್ಲಿ ಈ ಮನೆತನಕ್ಕೆ ಪನಿಯಾರ ತೆಂಗಿನಕಾಯಿ ಕೊಡಬೇಕು.

ಮುಕ್ಕೋಡಿ, ಇದು ಪೆರ್ಮುದೆಯ ಬಿಲ್ಲವ ಸಮುದಾಯದ ಪ್ರಥಮ ಮರ್ಯಾದೆಯ ಮನೆ. ಈ ಮನೆಯಲ್ಲಿ ಪೆರ್ಮುದೆ ಊರಿನ ಅತೀ ಕಾರ್ಣಿಕದ ದೈವ ಪಿಲಿಚಂಡಿಯ ಭಂಡಾರ ಮನೆಯಾಗಿದೆ. ಒಂದು ಕಾಲದಲ್ಲಿ ಬೊಳ್ಳೊಳ್ಳಿಮಾರುಗುತ್ತಿಗೆ ಪ್ರಥಮವಾಗಿ ಪ್ರವೇಶ ಮಾಡಿದ ಪಿಲಿಚಂಡಿ ದೈವ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ನಡೆದ ಧರ್ಮ ನೇಮವನ್ನು ನೋಡಲು ಬಂದ ಮುಕ್ಕೋಡಿಯ ಅಂದಿನ ಯಜಮಾನ ಮುಕ್ಕೋಡಿ ದೂಮ"ನ ಭಕ್ತಿಗೆ ಮೆಚ್ಚಿ ಮುಕ್ಕೋಡಿಯನ್ನು ಪಿಲಿಚಂಡಿಯ ಭಂಡಾರದ ಮನೆ ಮಾಡಲು ಜೊತೆಗೆ ಅ ಮನೆಯ ಸಂಸಾರದವರೇ ಪಿಲಿಚಂಡಿಗೆ ದರ್ಶನದ ಪಾತ್ರಿ ಯಾಗಬೇಕೆಂಬ ಉದ್ದೇಶದಿಂದ ಮುಕ್ಕೋಡಿ ಯನ್ನು ಪ್ರವೇಶಿಸಿತು. ಪೆರ್ಮುದೆ ಊರಿನಲ್ಲಿ ಪಿಲಿಚಂಡಿಗೆ ಮುಗ ಹಾಗೂ ಆಯುಧವನ್ನು ಮುಕ್ಕೋಡಿ ಹೊರತು ಬೇರೆ ಮನೆಗಳಲ್ಲಿ ಇಡಬಾರದು.ಈ ಮನೆಗೂ ಪೆರ್ಮುದೆ ಊರಿನ ಗುತ್ತು ಮನೆತನಗಳಲ್ಲಿ ನಡೆಯುವ ದೈವಗಳ ಕಾರ್ಯಕ್ರಮದಲ್ಲಿ ಈ ಮನೆಗೂ ಪನಿಯಾರ ತಾರಾಯಿ ಮರ್ಯಾದೆ ಸಲ್ಲಿಸಬೇಕು. ಪೆರ್ಮುದೆ ಊರಿನ ಗಡುಪಾಡಿ ನೇಮ,ದೇವಸ್ಥಾನದ ನೇಮ, ಪಾಲ್ದಟ್ಟೆ ಸಾನದ ನೇಮ ಹಾಗೂ ಕಡೆಗೆ ಮುಕ್ಕೋಡಿ ಮುಲಗುಡ್ಡೆ ಸಾನದಲ್ಲಿ ನೇಮ ಆಗುವಾಗ ಪಿಲಿಚಂಡಿಯ ಭಂಡಾರ ಹೋಗಿ ನೇಮವಾಗುತ್ತದೆ. ಮುಕ್ಕೋಡಿಯ ಪಿಲಿಚಂಡಿ ಭಂಡಾರ ಇಳಿಸುವ ಅಧಿಕಾರ ಬೊಳ್ಳೊಳ್ಳಿಮಾರುಗುತ್ತಿನ ಮಾಡರಿಗೆ ಇರುವ ಅಧಿಕಾರ ಜೊತೆಗೆ ಪಿಲಿಚಂಡಿಯ ಹುಲಿಯ ಮೂರ್ತಿಯನ್ನು ಹಿಡಿದುಕೊಂಡು ನೇಮ ಅಗುವಲ್ಲಿಗೆ ಭಂಡಾರ ದೊಟ್ಟಾಗಿ ಹೋಗಬೇಕು. ಮುಕ್ಕೋಡಿ ನೇಮವಾದ ಮೇಲೆ ಬೇರೆ ಗುತ್ತು ಮನೆತನಗಳಲ್ಲಿ ನೇಮವಾಗಬಾರದು.